ಇಡ್ರಿಯ
ಗಣಿ ಮತ್ತು ಇತರ ಕೈಗಾರಿಕೆಗಳನ್ನುಳ್ಳ ಚಿಕ್ಕ ಪಟ್ಟಣ. ಯುಗೋಸ್ಲಾವಿಯದ ವಾಯವ್ಯಮೂಲೆಯಲ್ಲಿ ಅದೇ ಹೆಸರಿನ ನದಿ ತೀರದಲ್ಲಿದೆ. ಟ್ರೀಸ್ಟ್ ಪಟ್ಟಣಕ್ಕೆ ಮೂವತ್ತು ಮೈಲಿ. ಇಲ್ಲಿರುವ ಪಾದರಸದ ಒಂದು ಅದುರಾದ ಸಿನ್ನಬಾರ್‍ನ ಗಣಿ ಜಗತ್ ಪ್ರಸಿದ್ಧವಾದವುಗಳಲ್ಲೊಂದು. ಹದಿನೈದನೆಯ ಶತಮಾನದಿಂದಲೂ ಈ ಅದುರನ್ನು ಗುರುತಿಸಿ ಉತ್ಖನನ ಮಾಡುತ್ತಿದ್ದಾರೆ. ಹದಿನಾರನೆಯ ಶತಮಾನದಿಂದೀಚೆಗೆ ಉತ್ಪನ್ನವನ್ನು ಸರ್ಕಾರ ನಿಯಂತ್ರಿಸಿದೆ. ಚಾರಿತ್ರಿಕವಾಗಿ ಇಡ್ರಿಯ ಮೊದಲು ಇಟಲಿಗೆ ಸೇರಿದ್ದು ಎರಡನೆಯ ಮಹಾಯುದ್ಧಾನಂತರ ಯುಗೋಸ್ಲಾವಿಯಕ್ಕೆ ಸೇರಿದೆ. ಜನಸಂಖ್ಯೆ 5,148 (1948).			

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ